ಹೆಚ್ಚುವರಿ ಮಟ್ಟದ ರಕ್ಷಣೆಯನ್ನು ಸೇರಿಸಿ
ಭದ್ರತಾ ಪ್ರಶ್ನೆಗಳೊಂದಿಗೆ

ಭದ್ರತಾ ಪ್ರಶ್ನೆಗಳು ಎಂದರೇನು?
ಭದ್ರತಾ ಪ್ರಶ್ನೆಗಳೆಂದರೆ ಹೆಚ್ಚುವರಿ ಮಟ್ಟದ ರಕ್ಷಣೆಯನ್ನು ಸೇರಿಸುವ ಭದ್ರತಾ ವೈಶಿಷ್ಟ್ಯವಾಗಿದೆ. ನಿಮ್ಮ ಆಯ್ಕೆಯ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಲು ನೀವು ಸ್ವತಂತ್ರರಾಗಿರುತ್ತೀರಿ. ನೀವು ಈಗ ನೀಡುವ ಉತ್ತರಗಳನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ಸಂಪೂರ್ಣ ಗೌಪ್ಯವಾಗಿ, ಸುರಕ್ಷಿತವಾಗಿ ಮತ್ತು ಸುಭದ್ರವಾಗಿಡಲಾಗುತ್ತದೆ. ನಮ್ಮ ಭದ್ರತಾ ಇಂಜಿನ್ ನಿಮ್ಮನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತದೆ ಹಾಗೂ ನಿಮ್ಮ ಸಾಮಾನ್ಯ ಆನ್ಲೈನ್ ಬ್ಯಾಂಕಿಂಗ್ ಬಳಕೆಯ ನಡವಳಿಕೆಯಿಂದ ಯಾವುದೇ ಬದಲಾವಣೆ ಗಮನಿಸಿದರೆ (ಆದರೆ ಮಾತ್ರ) ನಿಮಗೆ ಪ್ರಶ್ನೆಯನ್ನು ಕೇಳಬಹುದು. ಪ್ರಾಂಪ್ಟ್ ಮಾಡಿದಾಗ, ನೀವು ಈಗ ಉತ್ತರಿಸುವ ರೀತಿಯಲ್ಲಿಯೇ ನೀವು ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.
ನಮ್ಮ ಭದ್ರತಾ ಇಂಜಿನ್ ನಿಮ್ಮ ಸಾಮಾನ್ಯ ನಡವಳಿಕೆಯಿಂದ ಯಾವುದೇ ಬದಲಾವಣೆಯನ್ನು ಗಮನಿಸಿದಾಗ ನಿಮ್ಮ ಉತ್ತರಗಳನ್ನು ನಿಮ್ಮ ಗುರುತನ್ನು ದೃಢೀಕರಿಸಲು ಮಾತ್ರ ಬಳಸಲಾಗುತ್ತದೆ ಎಂದು ದಯವಿಟ್ಟು ಗಮನಿಸಿ.
ಈ ಭದ್ರತಾ ಪ್ರಶ್ನೆಗಳನ್ನು ಹೊಂದಿಸುವಾಗ ನಾನು ನೆನಪಿನಲ್ಲಿಡಬೇಕಾದ ಅಂಶಗಳೇನು?
ನಿಮ್ಮ ವೈಯಕ್ತಿಕ ಉತ್ತರಗಳೊಂದಿಗೆ ನೀವು ಹೊಂದಿಸಿರುವ ಮೂರು ಪ್ರಶ್ನೆಗಳು ನಿಮ್ಮ ಗುರುತನ್ನು ಪರಿಶೀಲಿಸಲು ನಮಗೆ ಸಹಾಯ ಮಾಡುತ್ತವೆ. ಈ ಪ್ರಶ್ನೆಗಳನ್ನು ಹೊಂದಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು:
- ನಿಮಗೆ ವೈಯಕ್ತಿಕವಾಗಿರಬೇಕು
- ನೀವು ನೆನಪಿಟ್ಟುಕೊಳ್ಳಲು ಸುಲಭವಾಗಿದ್ದು, ಬೇರೆಯವರಿಗೆ ಊಹಿಸಲು ಕಷ್ಟವಾಗುವಂತಿರಬೇಕು
- ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ 'ಸಾರ್ವಜನಿಕ' ಪ್ರೊಫೈಲ್ನಿಂದ ಇರಬಾರದು
- ಯಾರಿಗೂ ಬಹಿರಂಗಪಡಿಸಬಾರದು
ಅಧಿಕೃತ ಬ್ಯಾಂಕ್ ಉದ್ಯೋಗಿ ಇದನ್ನು ಎಂದಿಗೂ ಕೇಳುವುದಿಲ್ಲ ಎನ್ನುವುದನ್ನು ಗಮನಿಸಿ.
ಈ ಪ್ರಶ್ನೆಗಳನ್ನು ನನಗೆ ಯಾವಾಗ ಕೇಳಲಾಗುತ್ತದೆ?
ನಿಮಗೆ ಹೆಚ್ಚಿನ ಭದ್ರತೆಯನ್ನು ನೀಡಲು ನಮ್ಮ ಭದ್ರತಾ ಇಂಜಿನ್ ಹಿನ್ನೆಲೆಯಲ್ಲಿ ರನ್ ಆಗುತ್ತಿರುತ್ತದೆ. ನಿಮ್ಮ ಸಾಮಾನ್ಯ ಆನ್ಲೈನ್ ಬ್ಯಾಂಕಿಂಗ್ ಬಳಕೆಯ ನಡವಳಿಕೆಯಿಂದ ಯಾವುದೇ ಬದಲಾವಣೆ ಗಮನಿಸಿದರೆ (ಆದರೆ ಮಾತ್ರ) ನಮ್ಮ ಸಿಸ್ಟಂ ನಿಮಗೆ ಪ್ರಶ್ನೆಯನ್ನು ಕೇಳಬಹುದು.
ನೀವು ಕೆಲವು ವಹಿವಾಟುಗಳನ್ನು ಪೂರ್ಣಗೊಳಿಸುತ್ತಿರುವಾಗ ಅಥವಾ ಆನ್ಲೈನ್ ಬ್ಯಾಂಕಿಂಗ್ಗೆ ಲಾಗ್ ಇನ್ ಆಗುತ್ತಿರುವಾಗ ನಿಮ್ಮನ್ನು ಪ್ರಾಂಪ್ಟ್ ಮಾಡಬಹುದು. ಆನ್ಲೈನ್ ಬ್ಯಾಂಕಿಂಗ್ನಲ್ಲಿ ನಿಮ್ಮ ಗುರುತನ್ನು ಪರಿಶೀಲಿಸಲು ಈ ಪ್ರಾಂಪ್ಟ್ ಇರುತ್ತದೆ.
ಇದು ಭದ್ರತೆಯನ್ನು ಹೇಗೆ ಸುಧಾರಿಸುತ್ತದೆ?
ಭದ್ರತಾ ಪ್ರಶ್ನೆಗಳು ಹೆಚ್ಚುವರಿ ಮಟ್ಟದ ರಕ್ಷಣೆಯನ್ನು ಸೇರಿಸುವ ಭದ್ರತಾ ವೈಶಿಷ್ಟ್ಯವಾಗಿದೆ. ಈ ಪ್ರಶ್ನೆಗಳು ಮತ್ತು ಉತ್ತರಗಳು ನಿಮಗೆ ವೈಯಕ್ತಿಕವಾಗಿರುತ್ತದೆ ಮತ್ತು ನಿಮ್ಮ ಗುರುತನ್ನು ಪರಿಶೀಲಿಸಲು ನಮಗೆ ಸಹಾಯ ಮಾಡುತ್ತವೆ. ಭದ್ರತಾ ಪ್ರಶ್ನೆಗಳ ಜೊತೆಗೆ ವಂಚನೆ ಪತ್ತೆ ವ್ಯವಸ್ಥೆ, ಎನ್ಕ್ರಿಪ್ಶನ್, ಫೈರ್ವಾಲ್ಗಳು ಹಾಗೂ ಸ್ವಯಂಚಾಲಿತ ಟೈಂ-ಔಟ್ಗಳು ಸೇರಿದಂತೆ ಇಂಡಸ್ ಇಂಡ್ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಮತ್ತಷ್ಟು ಸುರಕ್ಷಿತವಾಗಿಸುವ ಹಲವಾರು ಭದ್ರತಾ ಕ್ರಮಗಳಿವೆ.
ಉದಾಹರಣೆಗಳು
ಇಲ್ಲಿ ನೀಡಲಾದ ಉತ್ತರಗಳು ಕೇವಲ ಸೂಚಕ ಮಾತ್ರವಾಗಿದೆ. ದಯವಿಟ್ಟು ಈ ನಿಖರ ಉತ್ತರಗಳನ್ನು ಬಳಸಬೇಡಿ.
ನಿಮ್ಮ ರಜಾದಿನದ ಮನೆ ಯಾವ ನಗರದಲ್ಲಿದೆ?
ನೈನಿತಾಲ್ (ಉತ್ತರ ನಿಮ್ಮ ಸಾಮಾಜಿಕ ಮಾಧ್ಯಮದ ಪ್ರೊಫೈಲ್ ನಿಂದ ತಿಳಿದಿರಬಾರದು)ನಿಮ್ಮ ಮೊದಲ ಸಾಕುಪ್ರಾಣಿಯ ಹೆಸರೇನು?
ರೂಸ್ಟರ್ (ಉತ್ತರ ನಿಮಗೆ ವೈಯಕ್ತಿಕವಾಗಿರಬೇಕು)ನೀವು ಕೆಲಸ ಮಾಡಿದ ಮೊದಲ ಕಂಪನಿಯ ಹೆಸರೇನು?
ಎಬಿಸಿ ಲಿಮಿಟೆಡ್ (ಸಾಮಾಜಿಕ ವೇದಿಕೆಗಳಲ್ಲಿ ಉತ್ತರ ಸುಲಭವಾಗಿ ಲಭ್ಯವಿರುವುದರಿಂದ ಅನುಮತಿಸಲಾಗುವುದಿಲ್ಲ)ನಿಮ್ಮ ಮುದ್ದಿನ ಹೆಸರೇನು?
ಎಎಎ ಅಥವಾ ಪಿಕ್ಯುಆರ್ (ಒಂದೇ ಅಕ್ಷರ ಪುನರಾವರ್ತಿತವಾಗುವುದನ್ನು ಅನುಮತಿಸಲಾಗುವುದಿಲ್ಲ)