ನಿಮ್ಮ ಕಾರ್ಡ್ ಮಾಹಿತಿಯನ್ನು
ಸುರಕ್ಷಿತವಾಗಿಟ್ಟುಕೊಳ್ಳಲು ಸಲಹೆಗಳು
- ಬ್ಯಾಂಕ್ ಕಳುಹಿಸಿದ ಅಲರ್ಟ್‌ಗಳ ಬಗ್ಗೆ ಎಚ್ಚರ ವಹಿಸಿ: ಅವುಗಳೆಂದರೆ ವಹಿವಾಟಿನ ಅಲರ್ಟ್‌ಗಳು, ವಿಳಾಸ, ಮೊಬೈಲ್ ನಂಬರ್ ಬದಲಾವಣೆಗಳು, ಇತ್ಯಾದಿ. ಮತ್ತು ಭಿನ್ನಾಭಿಪ್ರಾಯಗಳುಂಟಾದ ಸಂದರ್ಭದಲ್ಲಿ ಬ್ಯಾಂಕಿಗೆ ಮಾಹಿತಿ ನೀಡಿ.
- ನೀವು ಬ್ಯಾಂಕಿಗೆ ನೀಡಿದ ವಿಳಾಸ ಅಥವಾ ಮೊಬೈಲ್ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಗಳಾದ ಸಂದರ್ಭದಲ್ಲಿ ತಕ್ಷಣ ಬ್ಯಾಂಕಿಗೆ ಮಾಹಿತಿ ನೀಡಿ
- ನಿಮ್ಮ ವೈಯಕ್ತಿಕ ಗುರುತು ಸಂಖ್ಯೆಯನ್ನು (ಪಿಐಎನ್- PIN) ನೆನಪಿಸಿಕೊಳ್ಳಿ, ಅದನ್ನು ನಿಯಮಿತವಾಗಿ ಬದಲಾಯಿಸುತ್ತಿರಿ, ಮತ್ತು ಪಿಐಎನ್ (PIN) ಸಂಖ್ಯೆಗೆ ಸಂಬಂಧಿಸಿದ ಯಾವುದೇ ಭೌತಿಕ ದಾಖಲೆಗಳನ್ನು ನಾಶಪಡಿಸಿ.
- ಮರ್ಚೆಂಟ್ ಔಟ್ಲೆಟ್‌ನಲ್ಲಿ ಒಂದು ವ್ಯವಹಾರದ ನಂತರ ನಿಮಗೆ ಹಿಂದಿರುಗಿಸಲಾದ ಕ್ರೆಡಿಟ್/ಡೆಬಿಟ್ ಕಾರ್ಡ್ ನಿಮ್ಮದೇ ಎಂಬುದನ್ನು ಪರಿಶೀಲಿಸಿಕೊಳ್ಳಿ.
- ಮರ್ಚೆಂಟ್ ಔಟ್ಲೆಟ್‌ನಲ್ಲಿ ನಿಮ್ಮ ಉಪಸ್ಥಿತಿಯಲ್ಲೇ ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಸ್ವೈಪ್ ಮಾಡಬೇಕೆಂದು ಒತ್ತಾಯ ಮಾಡಿ.
- ಮೊತ್ತವನ್ನು ಪರಿಶೀಲಿಸಿಕೊಳ್ಳಲು, ವ್ಯವಹಾರದ ನಂತರ ವ್ಯವಹಾರದ ನೋಟಿಫಿಕೇಶನ್ ಸಂದೇಶವನ್ನು ಪರೀಕ್ಷಿಸಿಕೊಳ್ಳಿ.
- ಪಿಒಎಸ್ (POS) ಮೆಷಿನ್‌ಗಳು ಮತ್ತು ಎಟಿಎಂಗಳಲ್ಲಿ ಅದನ್ನು ನಮೂದಿಸುವಾಗ ಬೇರೆಯವರಿಗೆ ಕಾಣಿಸುತ್ತಿಲ್ಲ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಿ.
- ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಕಳೆದುಹೋಗಿರುವ ಬಗ್ಗೆ ಅಥವಾ ತಪ್ಪಿ ನೀವು ನಿಮ್ಮ ವಿವರಗಳನ್ನು ಯಾರ ಜೊತೆಗಾದರೂ ಹಂಚಿಕೊಂಡಿದ್ದರೆ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ.
- ಬ್ಯಾಂಕಿನ ಗ್ರಾಹಕ ಕಾಳಜಿ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಂಡಿರಿ, ಇದರಿಂದ ನಿಮಗೆ ಸಹಾಯ/ತುರ್ತು ಸಂದರ್ಭ/ಕಾರ್ಡ್ ಕಳೆದುಹೋಗುವುದು/ವಿವಾದಿತ ವ್ಯವಹಾರದಂತಹ ಪ್ರಕರಣಗಳಲ್ಲಿ ತಕ್ಷಣ ಕರೆ ಮಾಡಲು ಸಾಧ್ಯವಾಗುತ್ತದೆ.
- ಮೋಸದ ಸಂದೇಶಗಳು/ಕರೆಗಳು/ಇಮೇಲ್‌ಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಅಂತಹ ಯಾವುದೇ ಸಂವಹನಕ್ಕೆ ನಿಮ್ಮ ವೈಯಕ್ತಿಕ ಅಥವಾ ಖಾತೆಯ ವಿವರಗಳೊಂದಿಗೆ ಪ್ರತಿಕ್ರಿಯಿಸಬೇಡಿ.
- ಇಂಡಸ್‌ಇಂಡ್ ಬ್ಯಾಂಕ್ (IndusInd Bank) ನವರು ಎಂದು ಹೇಳಿಕೊಂಡು ಯಾವುದೇ ವ್ಯಕ್ತಿಯು ಕೇಳಿದರೂ, ಯಾರೊಬ್ಬರಿಗೂ ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಹಸ್ತಾಂತರಿಸಬೇಡಿ.
- ಯಾರೊಬ್ಬರಿಗೂ ನಿಮ್ಮ ಪಿನ್ (PIN)/ ಒಟಿಪಿ (OTP)/ ಸಿವಿವಿ (CVV)/ ವಿಬಿವಿ (VBV)/ ಮಾಸ್ಟರ್ ಸೆಕ್ಯೂರ್ ಪಾಸ್‌ವರ್ಡ್ (MASTER SECURE PASSWORDS) ಗಳನ್ನು ಬಹಿರಂಗಪಡಿಸಬೇಡಿ. ಬ್ಯಾಂಕ್ ಅಥವಾ ಯಾವುದೇ ಬೇರೆ ಸರ್ಕಾರಿ ಸಂಸ್ಥೆಯು ಈ ಮಾಹಿತಿಯನ್ನು ಕೇಳುವುದಿಲ್ಲ.
- ಸುರಕ್ಷಿತವಲ್ಲದ ವೈ-ಫೈ ನೆಟ್ವರ್ಕ್ ಬಳಸಿ ನಿಮ್ಮ ಕಾರ್ಡ್/ಖಾತೆಯನ್ನು ಅಕ್ಸೆಸ್ ಮಾಡಬೇಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ, ಅಂತಹ ನೆಟ್‌ವರ್ಕ್‌ಗಳಲ್ಲಿ ಆನ್‌ಲೈನ್ ಖರೀದಿ ಮಾಡಬೇಡಿ.
- ಬೇರೆಯವರು ನಿಮಗೆ ಸ್ವಯಂಪ್ರೇರಿತರಾಗಿ ಸಹಾಯ ಮಾಡುತ್ತೇವೆ ಎಂದರೂ, ಎಟಿಎಂ (ATM)ನಲ್ಲಿ ಅಪರಿಚಿತರಿಂದ ಸಹಾಯ ಕೇಳಬೇಡಿ.